ಎಂ. ಜಯಶ್ರೀ (೧೯೨೧ - ೨೦೦೬), ಮುಖ್ಯವಾಗಿ ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಭಾರತೀಯ ನಟಿ. ಅವರು ರಾಯರ ಸೊಸೆ (೧೯೫೭), ನಾಗರಹಾವು (೧೯೭೨), ಎರಡು ಕನಸು ಮತ್ತು ಶ್ರೀ ಶ್ರೀನಿವಾಸ ಕಲ್ಯಾಣ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರನ್ನು 'ಬೆಳ್ಳಿತೆರೆಯ ಅಮ್ಮ' ಎಂದು ಪ್ರೀತಿಯಿಂದ ಕರೆಯಲಾಗುತ್ತಿತ್ತು. ೧೯೭೦ ರಲ್ಲಿ ಅವರು ಅಮರ ಭಾರತಿ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. == ವೃತ್ತಿ == ಜಯಶ್ರೀ ಅವರನ್ನು ತಮಿಳುನಾಡಿನ ಪಕ್ಷಿರಾಜ್ ಸ್ಟುಡಿಯೋಗೆ ದೇವಿ ಅವರು ಕರೆತಂದರು. ದೇವಿ ಅವರು ತಮಿಳು ಚಲನಚಿತ್ರ ವಾಜಿವಿಲ್ ತಿರುನಾಳ್‌ನಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟ ಸ್ಟುಡಿಯೋ ಮಾಲೀಕರ ಸಹೋದರಿ. ಜಯಶ್ರೀಗೆ ತಮಿಳು ಸಿನಿಮಾಗಳಲ್ಲಿ ಅವಕಾಶಗಳು ಹರಿದು ಬಂದಿದ್ದವು. ಇದನ್ನು ಕನ್ನಡ ಚಲನಚಿತ್ರ ನಿರ್ಮಾಪಕ ಹೊನ್ನಪ್ಪ ಭಾಗವತರು ಗಮನಿಸಿ ಅವರನ್ನು ೧೯೪೮ರ ಭಕ್ತ ಕುಂಬಾರದಿಂದ ಕನ್ನಡ ಚಲನಚಿತ್ರಕ್ಕೆ ಹಾಕಿದರು. ಇದರ ಮೂಲಕ ಜಯಶ್ರಿ ಅವರು ಕನ್ನಡ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ನಾಯಕಿಯಾಗಿ ಕನ್ನಡದಲ್ಲಿ ಅವರ ಮುಂದಿನ ಯೋಜನೆಯು ೧೯೪೯ ರಲ್ಲಿ ಜಿ. ವಿಶ್ವನಾಥ್ ನಿರ್ದೇಶಿಸಿದ ಬ್ಲಾಕ್ಬಸ್ಟರ್ ಚಲನಚಿತ್ರ ನಾಗಕನ್ನಿಕಾ,. ಇದು ಜಾನಪದ ಕಥೆಯನ್ನು ಆಧರಿಸಿದ ಮೊದಲ ಕನ್ನಡ ಚಲನಚಿತ್ರ ಎಂದು ಪರಿಗಣಿಸಲಾಗಿದೆ. ಅವರು ೧೯೫೧ ರಲ್ಲಿ ಅವರ ಮುಂದಿನ ಚಲನಚಿತ್ರ ತಿಲೋತ್ತಮೆಯಲ್ಲಿ ಶೀರ್ಷಿಕೆ ಪಾತ್ರವನ್ನು ನಿರ್ವಹಿಸಿದರು. ಕ್ರಮೇಣ ಅವರು ಡಾ. ರಾಜ್‌ಕುಮಾರ್, ಕಲ್ಯಾಣ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಟೈಗರ್ ಪ್ರಭಾಕರ್, ರಾಜೇಶ್, ಗಂಗಾಧರ್, ಶ್ರೀನಾಥ್ ಮತ್ತು ಹಲವರಿಗೆ ಅತ್ತೆ, ಅಮ್ಮ, ಚಿಕ್ಕಮ್ಮನ ಪೋಷಕ ಪಾತ್ರಗಳಿಗೆ ಸ್ಥಳಾಂತರಗೊಂಡರು. ಐದು ದಶಕಗಳ ತಮ್ಮ ನಟನಾ ವೃತ್ತಿಜೀವನದಲ್ಲಿ, ಜಯಶ್ರೀ ಅವರು ೪೫೦ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. == ಕೊನೆಯ ದಿನಗಳು ಮತ್ತು ಸಾವು == ೧೯೯೦ರ ದಶಕದಲ್ಲಿ ಜಯಶ್ರೀ ಕೇವಲ ಎರಡು ಸಿನಿಮಾಗಳನ್ನು ಮಾಡಿದ್ದರು. ಅವರ ಕೊನೆಯ ಬಿಡುಗಡೆಯಾದ ಚಿತ್ರ ಸಾವಿರ ಮೆಟ್ಟಿಲು, ಇದು ಪುಟ್ಟಣ್ಣ ಕಣಗಾಲ್ ಅವರ ಅಪೂರ್ಣ ಚಿತ್ರ ಹಾಗು ಇದನ್ನು ಕೆ.ಎಸ್.ಎಲ್. ಸ್ವಾಮಿ ಅವರು ಮುಗಿಸಿದರು. ಜಯಶ್ರೀ ಅವರು ತಮ್ಮ ಜೀವನದ ಕೊನೆಯ ವರ್ಷಗಳನ್ನು ಮೈಸೂರಿನ ವೃದ್ಧಾಶ್ರಮವಾದ ಶ್ರೀ ವಾಸವಿ ಶಾಂತಿಧಾಮದಲ್ಲಿ ಕಳೆದರು. ಅವರು ೨೯ ಅಕ್ಟೋಬರ್ ೨೦೦೬ ರಂದು ಮುಂಜಾನೆ ಹೃದಯಾಘಾತದಿಂದ ನಿಧನರಾದರು. == ಪ್ರಶಸ್ತಿಗಳು == ೧೯೭೦-೭೧ - ಅಮರ ಭಾರತಿ ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ . == ಆಯ್ದ ಚಿತ್ರಕಥೆ == === ತಮಿಳು === ವಿಝಿವಿಲ್ ತಿರುನಾಳ್ === ಕನ್ನಡ === ಭಕ್ತ ಕುಂಬಾರ (೧೯೪೮) ನಾಗಕನ್ನಿಕಾ (೧೯೪೯) ತಿಲೋತ್ತಮೆ (೧೯೫೧) ಜಗನ್ಮೋಹಿನಿ (೧೯೫೧) ಮಂಗಳ ಗೌರಿ (೧೯೫೩) ಮುತ್ತೈದೆ ಭಾಗ್ಯ (೧೯೫೬). . . ಗೌರಿ ರಾಯರ ಸೊಸೆ (೧೯೫೭) ಭಕ್ತ ಕನಕದಾಸ (೧೦೬೦) ನಾಂದಿ (೧೯೬೪). . . ಸಾವಿತ್ರಿ ತುಂಬಿದ ಕೊಡ (೧೯೬೪). . . ಜಯ ನಾಗರಹಾವು (೧೯೭೨). . . ಸೋನಾಬಾಯಿ ದೇವರು ಕೊಟ್ಟ ತಂಗಿ (೧೯೭೩) ಶ್ರೀ ಶ್ರೀನಿವಾಸ ಕಲ್ಯಾಣ (೧೯೭೪) ಅರುಣ ರಾಗ (೧೯೮೬) ನಮ್ಮೂರ ಹಮ್ಮೆರಾ (೧೯೯೦) == ಇವನ್ನು ಸಹ ನೋಡಿ == ಅತ್ಯುತ್ತಮ ಪೋಷಕ ನಟಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಜಯಶ್ರಿ